RMP

Friday, August 8, 2008

ಇದು ಸಾಧ್ಯ!!!

ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರದ ಹತ್ತಿರದ ರಾಜಗಟ್ಟ ಎಂಬ ಕುಗ್ರಾಮದಲ್ಲಿ ಕಡು ಬಡತನದಲ್ಲಿ ಹುಟ್ಟಿ ಅನ್ನಕ್ಕೂ ಗತಿಯಿಲ್ಲದ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಹೆಚ್ಹಿನವರಂತೆ ಮುಂಬೈ ಮಹಾನಗರಿಗೆ ಹೋಗಿ ೨-೩ ವರ್ಷ ಹೋಟೆಲ್ಗಳಲ್ಲಿ ತಟ್ಟೆ ಲೋಟ ತೊಳೆದು ಅಲ್ಲೂ ಸಾಧ್ಯವಾಗದೇ ಬೆಂಗಳೂರಿಗೆ ವಾಪಸು ಬಂದು ಶೇಷಾದ್ರಿಪುರಂನ ಸ್ವಾತಿ ಲೋದ್ಜಿನಲ್ಲಿ ರೂಮ್ ಬಾಯ್ ಆಗಿ ಇದ್ದು ನಂತರ ಜೀವನ ಶಂಕರೆ ಗೌಡರನ್ನು ರೈಲು ಹತ್ತಿಸಿತು. ಅಂದು ಮೈಸೂರ್ - ಬೆಂಗಳೂರ್ ರೈಲಿನಲ್ಲಿ "ವಡೆ, ವಡೆ...ಮದ್ದೂರ್ ವಡೆ" ಎಂದು ವಡೆ ಮಾರುತ್ತಿದ್ದ ಶಂಕರೆ ಗೌಡ ಆಲಿಯಾಸ್ ವಡೆ ಶಂಕರ ಇವತ್ತು ಟಾಟಾ ಇಂಡಿಗೋ ಕಾರಿನಲ್ಲಿ ಸೂಟು ಟೈ ಹಾಕಿಕೊಂಡು ಓಡಾಡುತ್ತಿದ್ದಾರೆ.

ಕಂಬಳಿ ಹುಳ ಕಣ್ಣ ಮುಂದೆಯೇ ಸಪ್ತವರ್ಣಗಳ ಚಿಟ್ಟೆಯಾದ ಅದ್ಬುತ ದಂತಕತೆ ಕರ್ನಾಟಕದಾದ್ಯಂತ ಜನರ ಮೈ ನವಿರೆಳಿಸಿದೆ.